¡Sorpréndeme!

ರಾಜ್ಯ ಸರ್ಕಾರದಿಂದ ಜನಪ್ರಿಯ ಯೋಜನೆ ಘೋಷಣೆ | Oneindia Kannada

2018-08-25 1,276 Dailymotion

Chief minister H.D.Kumaraswamy has proposed another popular scheme which provides 12 hours zero interest scheme for small traders.

ಮೀಟರ್ ಬಡ್ಡಿ ದಂಧೆ ತಪ್ಪಿಸಲು ಸರ್ಕಾರದಿಂದಲೇ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಟರ್ ಬಡ್ಡಿ ತಪ್ಪಿಸಲು ಸರ್ಕಾರದಿಂದ ಮೊಬೈಲ್ ಬ್ಯಾಂಕಿಂಗ್ ಆರಂಭಿಸಲಾಗುತ್ತಿದೆ, ಸರ್ಕಾರದಿಂದ ದಿನಕ್ಕೆ ಸಾವಿರ ರೂ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಬೆಳಗ್ಗೆ ಸಾಲ ಪಡೆದು ಸಂಜೆ ತೀರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ, ಸರ್ಕಾರ ನೀಡುವ ಈ ಸಾಲಕ್ಕೆ ಯಾವುದೇ ಬಡ್ಡಿಯಿಲ್ಲ ಎಂದು ತಿಳಿಸಿದರು. ಕುಮಾರಸ್ವಾಮಿಯಿಂದ ಏನೂ ಆಗಲ್ಲ ಅಂತಿದ್ರು, ಇನ್ನೂ ಮೂರರಿಂದ ನಾಲ್ಕು ತಿಂಗಳು ಕಾಯಿರಿ ಕುಮಾರಸ್ವಾಮಿ ಏನು ಎನ್ನುವುದನ್ನು ತೋರಿಸುತ್ತೇನೆ ನಾನು ಅಧಿಕಾರವನ್ನು ಉಳಿಸಿಕೊಳ್ಳಲು ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಹೇಳಿದರು.